ಭಾರತದ ಮುಖ್ಯ ನ್ಯಾಯಾಧೀಶರು ಎನ್ನುವುದು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿನ ಅತ್ಯಂತ ಶ್ರೇಷ್ಠ ನ್ಯಾಯಾಧೀಶರ ಪದವಿಯಾಗಿದೆ. ಇದು ಭಾರತದಲ್ಲಿ ಒಬ್ಬ ನ್ಯಾಯಾಧೀಶರು ಹೊಂದಬಹುದಾದ ನ್ಯಾಯಾಧೀಶರ ಅತ್ಯುನ್ನತ ಸ್ಥಾನವಾಗಿದೆ. ಮುಖ್ಯ ನ್ಯಾಯಾಧೀಶರು ಸರ್ವೋಚ್ಛ ನ್ಯಾಯಾಲಯದ ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳುವುದಲ್ಲದೆ, ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿರುವ ಪ್ರಮುಖ ನ್ಯಾಯಾಧೀಶರಂತೆ ಸಕ್ರಿಯ ಕಾರ್ಯ ನಿರ್ವಹಿಸುವರು. == ನ್ಯಾಯಾಧೀಶರ ಆಡಳಿತಾತ್ಮಕ ಕಾರ್ಯಗಳು == ಆಡಳಿತಾತ್ಮಕವಾಗಿ ಮುಖ್ಯ ನ್ಯಾಯಾಧೀಶರು ಈ ಕೆಳಗಿನ ಕಾರ್ಯಗಳನ್ನು ನೆರವೇರಿಸುವರು; ಸರ್ವೋಚ್ಛ ನ್ಯಾಯಾಲಯದಲ್ಲಿರುವ ಇತರ ನ್ಯಾಯಾಧೀಶರಿಗೆ ಪ್ರಕರಣಗಳ(ವಿಷಯ ಪಟ್ಟಿ) ಹಂಚಿಕೆ ಸಿಬ್ಬಂದಿ ಅನುಕ್ರಮ ಪಟ್ಟಿ ನಿಭಾಹಿಸುವಿಕೆ ಮತ್ತು ನಿರ್ವಹಣೆ ನ್ಯಾಯಾಲಯದ ಅಧಿಕಾರಿಗಳ, ಕಚೇರಿ ಸಿಬ್ಬಂದಿ ನೇಮಕಾತಿ. ಸರ್ವೋಚ್ಛ ನ್ಯಾಯಾಲಯದ ಮೇಲ್ವಿಚಾರಣೆ ಮತ್ತು ಕಾರ್ಯಗಳಿಗೆ ಸಂಬಂಧಿಸಿದ ಸಾಮಾನ್ಯ ಮತ್ತು ಇತರ ಬಹುಮುಖದ ವಿಷಯಗಳು. ಮುಖ್ಯ ನ್ಯಾಯಾಧೀಶರು ಪ್ರಕರಣಗಳ ಹಂಚಿಕೆ ಮತ್ತು ಕಾನೂನಿನ ಪ್ರಮುಖ ವಿಷಯಗಳೊಂದಿಗೆ ವ್ಯವಹರಿಸಲು ಸಾಂವಿಧಾನಿಕ ಪೀಠಗಳನ್ನು ರಚಿಸುವ ಜವಾಬ್ದಾರಿ ಸಹ ಹೊಂದಿರುವರು. ಭಾರತದ ಸಂವಿಧಾನದ ಅನುಚ್ಛೇಧ ೧೪೫ ಮತ್ತು ೧೯೬೬ನ ಸರ್ವೋಚ್ಛ ನ್ಯಾಯಾಲಯದ ಕಾರ್ಯವಿಧಾನಗಳ ನಿಯಮದಂತೆ, ಮುಖ್ಯ ನ್ಯಾಯಾಧೀಶರು ಇತರ ನ್ಯಾಯಾಧೀಶರಿಗೆ ಕಾರ್ಯಭಾರ ಹಂಚುತ್ತಾರೆ. ಇತರ ನ್ಯಾಯಾಧೀಶರಿಗೆ ಹೆಚ್ಚು ಸಾಮರ್ಥ್ಯದ ಪೀಠದ ಅಗತ್ಯವಿದ್ದರೆ, ಮುಖ್ಯ ನ್ಯಾಯಾಧೀಶರನ್ನು ಕೇಳಿಪಡೆಯಬೇಕು. == ಭಾರತದ ಮುಖ್ಯ ನ್ಯಾಯಾಧೀಶರ ನೇಮಕಾತಿ: == ಭಾರತದ ಸಂವಿಧಾನದಡಿ ಅನುಚ್ಛೇಧ ೧೨೪ದಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ನ್ಯಾಯಾಧೀಶರ ನೇಮಕದ ವಿಧಾನ ವಿವರಿಸಲಾಗಿದೆ. ಆದಾಗ್ಯೂ ಸರ್ವೋಚ್ಛ ನ್ಯಾಯಾಲಯಕ್ಕೆ ಮುಖ್ಯ ನ್ಯಾಯಾಧೀಶರ ನೇಮಕದ ಬಗ್ಗೆ ಯಾವುದೇ ವಿಶೇಷ ನಿಬಂಧನೆಗಳಿಲ್ಲ. ಹಾಗಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ನ್ಯಾಯಾಧೀಶರ ನೇಮಕದ ಪ್ರಕ್ರಿಯೆಯು ಮುಖ್ಯ ನ್ಯಾಯಾಧೀಶರ ನೇಮಕಾತಿಗೂ ಅನ್ವಯಿಸುವುದು. ಸರ್ವೋಚ್ಛ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶರಾಗುವವರನ್ನು ಭಾರತ ಸರಕಾರವು ರಾಷ್ಟ್ರಪತಿಗಳಿಗೆ ಸೂಚಿಸುವುದು. ರಾಷ್ಟ್ರಪತಿಗಳು ಅದಕ್ಕೆ ಸಮ್ಮತಿಸಿ ಅಗತ್ಯವಿದ್ದರೆ ಸರ್ವೋಚ್ಛ ನ್ಯಾಯಾಲಯದ ಇತರ ನ್ಯಾಯಾಧೀಶರು ಮತ್ತು ರಾಜ್ಯಗಳಲ್ಲಿರುವ ಉಚ್ಚ ನ್ಯಾಯಾಲಯಗಳ ಸಲಹೆಯ ಮೇರೆಗೆ ಮುಖ್ಯ ನ್ಯಾಯಾಧೀಶರ ನೇಮಕಕ್ಕೆ ಚಾಲನೆ ನೀಡುವರು. ಇಲ್ಲಿ ಹಿರಿತನವನ್ನು ವಯಸ್ಸಿನ ಮೂಲಕ ಪರಿಗಣಿಸದೆ, ಸರ್ವೋಚ್ಛ ನ್ಯಾಯಾಲಯದೊಳಗೆ ಸಲ್ಲಿಸಿದ ಸೇವೆಯ ಆಧಾರದ ಮೇಲೆ ಪರಿಗಣಿಸಲಾಗುವುದು. ಹಾಗಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಹೆಚ್ಚು ಅನುಭವವಿರುವ ನ್ಯಾಯಾಧೀಶರು ಸಾಮಾನ್ಯವಾಗಿ ಸರಕಾರದಿಂದ ನಾಮಕರಣಗೊಂಡು ಮುಖ್ಯ ನ್ಯಾಯಾಧೀಶರಾಗಿ ನೇಮಕವಾಗಬಹುದು. == ವಿಧ್ಯುಕ್ತ ವಿಧಾನದ ಉಲ್ಲಂಘನೆ == ಈ ವಿಧ್ಯುಕ್ತ ವಿಧಾನವನ್ನು ಹಲವು ಬಾರಿ ಉಲ್ಲಂಘಿಸಲಾಗಿದೆ. ಅವುಗಳಲ್ಲಿ ಮುಖ್ಯ ನ್ಯಾಯಾಧೀಶರನ್ನಾಗಿ ಏಪ್ರಿಲ್ ೧೯೭೩ರಲ್ಲಿ .. ರಾಯ್‌ರವರ ನೇಮಕಾತಿ ಮತ್ತು ಜನವರಿ ೧೯೭೭ರಲ್ಲಿ ನ್ಯಾಯಮೂರ್ತಿ ಹಂಸರಾಜ್ ಖನ್ನಾರ ಹಿರಿತನ ಕಡೆಗಣಿಸಿ ನ್ಯಾಯಮೂರ್ತಿ ಮಿರ್ಜ಼ ಹಮೀದುಲ್ಲಾ ಬೇಗ್ರನ್ನು ನೇಮಿಸಿದ್ದು ಪ್ರಮುಖವಾದದ್ದು. ೧೯೭೩ರಲ್ಲಿ ರಾಯ್‌ರವರಿಗಿಂತ ಮೂರು ಜನ ಹಿರಿಯ ನ್ಯಾಯಾಧೀಶರಿದ್ದರೂ, ಅವರನ್ನೇ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕಮಾಡಲಾಗಿತ್ತು. ಈ ನೇಮಕಾತಿ ಪ್ರಕ್ರಿಯೆಯು ಇಂದಿರಾ ಗಾಂಧಿ ಭಾರತದ ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ನಡೆಯಿತು. ನಿಷ್ಟ ನ್ಯಾಯಾಧಿಕರಣ ಅಥವಾ ಸಮಾಜವಾದಿ ಸರ್ಕಾರಕ್ಕೆ ನಿಷ್ಟವಾದ ನ್ಯಾಯಾಧೀಶರ ಅಗತ್ಯವಿದೆ ಎಂದು ಈ ನೇಮಕಾತಿಯನ್ನು ಸರ್ಕಾರ ಸಮರ್ಥಿಸಿಕೊಂಡಿತ್ತು. ರಾಯ್‌ರವರು ಉದಾರವಾಗಿದ್ದಾರೆಂದು ತಿಳಿದು, ಪ್ರಸ್ತುತ ಸರಕಾರದಿಂದಾಗಿ ಸಾಂವಿಧಾನಿಕ ಬಿಕ್ಕಟ್ಟು ಎದುರಿಸುತ್ತಿದ್ದ ಇಂದಿರಾ ಗಾಂಧಿಯನ್ನು ಬೆಂಬಲಿ ಸುವರೆನ್ನುವ ನಂಬಿಕೆ ಮೇಲೆ ಅವರನ್ನು ನೇಮಿಸಲಾಯಿತು ಎಂಬ ಆಪಾದನೆಯೂ ಇದೆ. ಈ ನೇಮಕಾತಿ ಕುರಿತು ರಾಜಕೀಯ ಪ್ರತಿಗಾಮಿ ಮುತ್ಸದ್ದಿ ರಾಜ್‌ ನಾರಾಯಣ್‌ ಪ್ರತಿಭಟಿಸಿದರು. ಹೀಗಾಗಿ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿ ಮುಂದುವರಿಕೆಗೆ ಇದೇ ಪ್ರಮುಖ ಕಾನೂನು ತೊಡಕಾಗಿತ್ತು. ತುರ್ತುಪರಿಸ್ಥಿಯ ನಂತರ, ಐತಿಹಾಸಿಕ ತೀರ್ಪುಗಳ ಸರಣಿಯಿಂದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಹೆಚ್ಚಿನ ಅಧಿಕಾರ-ಸಾಮರ್ಥ್ಯ ಬಂದಿತು. ಈ ತೀರ್ಪುಗಳಲ್ಲಿ ಒಂದೆಂದರೆ (ಸಾಂವಿಧಾನಿಕ ಪೀಠ ಎಸ್.ಪಿ. ಗುಪ್ತ - ಪ್ರಕರಣದಲ್ಲಿ), ಭಾರತ ಸರಕಾರವು ಮುಖ್ಯ ನ್ಯಾಯಾಧೀಶರ ಸ್ಥಾನಕ್ಕಾಗಿ ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯಾಧೀಶರನ್ನು ಮಾತ್ರ ಸೂಚಿಬಹುದಾಗಿರುವುದು. ಇದರಿಂದಾಗಿ ಸರಕಾರ ಅಥವಾ ಅದರ ಸಾಮರ್ಥ್ಯ ಬಳಸಿ, ನ್ಯಾಯಾಂಗದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ. ಅಲ್ಲಿಂದೀಚೆಗೆ ನೇಮಕಾತಿ ಪ್ರಕ್ರಿಯೆ ಯಾವುದೇ ವಿನಾಯಿತಿಯಿಲ್ಲದೆ ನಡೆಯುತ್ತಿದೆ. ಮುಖ್ಯ ನ್ಯಾಯಾಧೀಶರು ಒಮ್ಮೆ ನೇಮಕವಾದರೆ, ಐದು ವರ್ಷಗಳವರೆಗೆ ಅಥವಾ ಅವರು ನಿವೃತ್ತಿಯಾಗುವವರೆಗೆ ಅಥವಾ ಅವುಗಳಲ್ಲಿ ಯಾವುದು ಮೊದಲು ಬರುವುದೋ, ಅಲ್ಲಿ ಯವರೆಗೆ ಅಥವಾ ದೋಷಾರೋಪಣೆಯ ಮೂಲಕ ಪದವಿಯಿಂದ ತೆಗೆದು ಹಾಕದೆ ಇರುವವರೆಗೆ ಹುದ್ದೆಯಲ್ಲಿರುತ್ತಾರೆ. == ಕೆಲ ತುಣುಕುಗಳು == ಭಾರತದ ಸಂವಿಧಾನ ಅನುಚ್ಛೇಧ ೬೦ರ ಪ್ರಕಾರ ಭಾರತದ ಮುಖ್ಯ ನ್ಯಾಯಾಧೀಶರು ಭಾರತದ ರಾಷ್ಟ್ರಪತಿಗಳಿಗೆ ಪ್ರಮಾಣವಚನ ಬೋದಿಸುವರು. ಉಪ ರಾಷ್ಟ್ರಪತಿ ಮತ್ತು ಭಾರತದ ರಾಷ್ಟ್ರಪತಿಗಳ ಅನುಪಸ್ಥಿತಿಯಲ್ಲಿ, ಮುಖ್ಯ ನ್ಯಾಯಾಧೀಶರು ಭಾರತದ ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುವರು. ಮುಖ್ಯ ನ್ಯಾಯಾಧೀಶರು ಅಧಿಕಾರ ವಹಿಸುವುದರೊಂದಿಗೇ ಸಾಮಾನ್ಯವಾಗಿ ಭಾರತದಲ್ಲಿರುವ ಹೆಚ್ಚಿನ ಸ್ವಾಯತ್ತ ಸಂಸ್ಥೆಯ ಕಾನೂನು ಶಾಲೆಗಳಿಗೆ ಕುಲಪತಿ/ಸಂದರ್ಶನ ಪ್ರಾಧ್ಯಾಪರಾಗಿರುವರು. ಇಲ್ಲಿಯವರೆಗೆ ಯಾವುದೇ ಮಹಿಳೆಯು ಭಾರತದ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿಲ್ಲ. ೨೦೦೦ರ ಜನವರಿ ೨೮ರಂದು ರುಮಾ ಪಾಲ್‌ರವರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡರು. ಎರಡು ದಿನದ ಮೊದಲು ನ್ಯಾಯಾಧೀಶರಾಗಿ ನೇಮಕಗೊಂಡಿದ್ದರೆ, ಅವರು ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶರಾಗಬಹುದಿತ್ತು. ಆದರೆ ೨೦೦೦ರ ಜನವರಿ ೨೬ರಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ವೈ.ಕೆ. ಸಭರ್ವಾಲ್‌ ನೇಮಕವಾಗಿದ್ದರು. ರುಮಾ ಪಾಲ್‌ಗಿಂತ ಎರಡು ದಿನ ಮೊದಲು ಸೇವೆಗೆ ಸೇರಿದ್ದರಿಂದಾಗಿ, ಸಭರ್ವಾಲ್‌ರು ಭಾರತದ ಮುಖ್ಯ ನ್ಯಾಯಾಧೀಶರಾದರು. ಹೀಗಾಗಿ ಕೇವಲ್ ಎರಡು ದಿನಗಳ ಹಿರಿತನವಿಲ್ಲದವರಿಗೆ ಅವಕಾಶ ಕೈತಪ್ಪಿತು. ಹೆಚ್.ಜೆ. ಕಾನಿಯಾ ಅವರು ಸರ್ವೋಚ್ಛ ನ್ಯಾಯಾಲಯದ ಮೊದಲ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆಯಾದರು ಅಥವಾ ನೇಮಕಗೊಂಡರು . ಇದಕ್ಕೂ ಮೊದಲು ಅವರು ಭಾರತದ ಸರ್ವೋಚ್ಛ ನ್ಯಾಯಾಲಯಕ್ಕೆ ಪೂರ್ವವರ್ತಿ(ಪೂರ್ವಾಧಿಕಾರಿ)ಯಾಗಿದ್ದ ಫೆಡರಲ್‌ ಕೋರ್ಟ್‌ ಆಫ್‌ ಇಂಡಿಯಾದ ಮುಖ್ಯ ನ್ಯಾಯಾಧೀಶರಾಗಿದ್ದರು == ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು == == ಇತರ ಉತ್ತಮ ನ್ಯಾಯಾಧೀಶರು == ಭಾರತದ ಮುಖ್ಯ ನ್ಯಾಯಾಧೀಶರ ನೇವಕಾತಿಯು ಸೇವಾ ಹಿರಿತನದ ಆಧಾರದ ಮೇಲೆ ನಡೆಯುತ್ತದೆ. ಇದರಿಂದಾಗಿ ಹಲವು ನ್ಯಾಯಾಧೀಶರು ಮತ್ತು ಸಂವಿಧಾನ ಪರಿಣತರು ಈ ನೇಮಕಾತಿ ವಿಧಾನವು ಪ್ರತಿಭೆಗಳಿಗೆ ವಿರುದ್ಧ ಮತ್ತು ನಾಯಕತ್ವ ಸಾಮರ್ಥ್ಯ ಗುರುತಿಸದ ಕ್ರಮ ಎಂದು ಟೀಕಿಸಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಹಲವಾರು ನ್ಯಾಯಮೂರ್ತಿಗಳು ಸ್ಪೂರ್ತಿದಾಯಕ ನಾಯಕತ್ವದ ಸಾಮರ್ಥ್ಯ ಪ್ರದರ್ಶಿಸಿದರೂ ಸಹ, ಸೇವಾ ಹಿರಿತನದ ಅಹ್ರತೆಯ ಪರಿಗಣನೆ ಯಿಂದಾಗಿ ಭಾರತದ ಮುಖ್ಯ ನ್ಯಾಯಾಧೀಶರಾಗಲು ಸಾಧ್ಯವಾಗಲಿಲ್ಲ. ಅವರಲ್ಲಿ ಕೆಲವರು ಈ ಕೆಳಗಿನಂತಿದ್ದಾರೆ; ನ್ಯಾಯಾಧೀಶರಾದ ಹಂಸರಾಜ್ ಖನ್ನಾರು ಹೇಬಿಯಸ್ ಕಾರ್ಪಸ್‌ ಪ್ರಕರಣದಲ್ಲಿ ನೀಡಿದ ತೀರ್ಪು ನ್ಯಾಯಾಂಗದಲ್ಲಿ ಹೆಗ್ಗುರುತಾಗಿ ಉಳಿದುಕೊಂಡಿತು. ನ್ಯಾಯಾಧೀಶರಾದ ವೈ.ಆರ್. ಕೃಷ್ಣ ಅಯ್ಯರ್‌ರು ತಮ್ಮ ಮಾನವ ಹಕ್ಕುಗಳು ಚಿಂತನೆ ಮತ್ತು ತೀರ್ಪು ನೀಡುವಲ್ಲಿ ಸಾಹಿತ್ಯಕ ಮೌಲ್ಯ ಗಳೊಂದಿಗೆ ಪ್ರಸಿದ್ಧರಾಗಿದ್ದರು. ನ್ಯಾಯಾಧೀಶರಾದ .ಎಸ್. ಸರ್ಕಾರಿಯಾರು ಆಡಳಿತಾತ್ಮಕ ಕಾನೂನು ಸೇರಿದಂತೆ ಇತ್ಯಾದಿಗಳಲ್ಲಿ ಕುರಿತು ತಮ್ಮಲ್ಲಿರುವ ಉನ್ನತ ಜ್ಞಾನಕ್ಕೆ ಪ್ರಸಿದ್ಧರಾಗಿದ್ದರು. ನ್ಯಾಯಾಧೀಶರಾದ ಓ.ಪಿ. ಚೆನ್ನಪ್ಪ ರೆಡ್ಡಿ ಅವರು ಸಾಂವಿಧಾನಿಕ ಕಾನೂನಿನಲ್ಲಿ ತಮ್ಮ ತೀರ್ಪುಗಳ ಮೂಲಕ ಪ್ರಸಿದ್ಧರಾಗಿದ್ದರು. ನ್ಯಾ. ಹಂಸರಾಜ್ ಖನ್ನಾರ ಹಿರಿತನವನ್ನು ಕಡೆಗಣಿಸಿ, ನ್ಯಾ. ಮಿರ್ಜಾ ಬೇಗ್ ರನ್ನು ಮುಖ್ಯ ನ್ಯಾಯಾಧೀಶ ಹುದ್ದೆಗೆ ನೇಮಕ ಮಾಡಲಾಯಿತು, ಈ ಕ್ರಮವನ್ನು ಬದ್ಧತೆಯ ನ್ಯಾಯದಾನ( ) ಕ್ಕಾಗಿ ಎಂದು ಇಂದಿರಾ ಗಾಂಧಿ ಸರ್ಕಾರ ಸಮರ್ಥಿಸಿಕೊಂಡಿತು. == ಇವನ್ನೂ ಗಮನಿಸಿ == ಭಾರತದ ಸರ್ವೋಚ್ಛ ನ್ಯಾಯಾಲಯ ಭಾರತದ ಸಂವಿಧಾನ ಭಾರತದ ಕಾನೂನು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾರತದ ಸಂವಿಧಾನ ಭಾರತದ ರಾಜ್ಯಗಳ ಜನಸಂಖ್ಯೆ ಭಾರತದ ನ್ಯಾಯಾಂಗ ಭಾರತದ ನ್ಯಾಯವ್ಯವಸ್ಥೆ ಭಾರತದ ಮುಖ್ಯ ನ್ಯಾಯಾಧೀಶರು == ಹೊರಗಿನ ಕೊಂಡಿಗಳು == ಭಾರತದ ಸರ್ವೋಚ್ಛ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ ಭಾರತದ ಹಿಂದಿನ ಮುಖ್ಯ ನ್ಯಾಯಾಧೀಶರ ಛಾಯಾಚಿತ್ರ ಗ್ಯಾಲರಿ